ಊನ್‍ಗಾರೆತಿ ಜೊಸೆಪ್ಪಿ
	ಸ್ವೇಚ್ಛಾ ಸಂಕೇತವಿಧಾನ (ಫ್ಯೂಚರಿಸಂ) ಅನುಸರಿಸುವ ಇಟಲಿಯ ನವ್ಯಕವಿಗಳಲ್ಲೊಬ್ಬ. ಹುಟ್ಟಿದ್ದು ಅಲೆಕ್ಸಾಂಡ್ರಿಂಯಾದಲ್ಲಿ (1888). ಬ್ರೆಜಿಲ್ಲಿನ ಸಾವೊಪಾಲೊದಲ್ಲಿ ಇಟಾಲಿಯನ್ ಸಾಹಿತ್ಯ ವಿಭಾಗದ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ. ಪ್ಯಾರಿಸ್ಸಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಫ್ರೆಂಚ್ ಸಂಕೇತಕವಿಗಳ (ಸಿಂಬಲಿಸ್ಟ್ಸ್) ಪ್ರಭಾವಕ್ಕೊಳಗಾಗಿ, ಮೊದಲ ಮಹಾಯುದ್ಧದಲ್ಲಿ ಆದ ಅನುಭವಗಳಿಂದ ಪ್ರಚೋದನೆ ಪಡೆದು ಗೂಢ ವಿಚಾರಗಳನ್ನೊಳಗೊಂಡ ಕಾವ್ಯಗಳನ್ನು ಹೊಸ ಶೈಲಿಯಲ್ಲಿ ಬರೆದ. ನವ್ಯಕಾವ್ಯ ಮಾಧ್ಯಮವೊಂದನ್ನು ಸಾಧಿಸಲು ಹೊರಟ ಕವಿಗಳಲ್ಲಿ ಈತ ಮುಖ್ಯನಾದವ. ಉಳಿದ ಕವಿಗಳು ಸಾಧಿಸಲಾರದೇ ಹೋದ ಭಾವತೀಕ್ಷ್ಣತೆ, ವಿಚಾರ ಸಂಕೀರ್ಣತೆ ಇವನಿಗೆ ಫಲಿಸಿವೆಯೆಂದು ಹೇಳಬಹುದು.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ